ಮಾಸ್ ಲೀಡರ್ ೨೦೧೭ ರ ಕನ್ನಡ ಭಾಷೆಯ ಆಕ್ಷನ್-ಥ್ರಿಲ್ಲರ್ ಚಲನಚಿತ್ರವಾಗಿದ್ದು, ನರಸಿಂಹ ಬರೆದು ನಿರ್ದೇಶಿಸಿದ್ದಾರೆ. ಇದನ್ನು ತರುಣ್ ಶಿವಪ್ಪ ಮತ್ತು ಹಾರ್ದಿಕ್ ಗೌಡ ಜಂಟಿಯಾಗಿ ನಿರ್ಮಿಸಿದ್ದಾರೆ. ಇದರಲ್ಲಿ ಶಿವ ರಾಜ್‌ಕುಮಾರ್ , ಆರ್ಮಿ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಪ್ರಣಿತಾ ಸುಭಾಷ್ ಪ್ರಮುಖ ಪಾತ್ರದಲ್ಲಿದ್ದರೆ ಮತ್ತು ವಿಜಯ್ ರಾಘವೇಂದ್ರ, ಯೋಗೇಶ್, ಗುರುರಾಜ್ ಜಗ್ಗೇಶ್, ಶರ್ಮಿಳಾ ಮಾಂಡ್ರೆ, ವಂಶಿ ಕೃಷ್ಣ, ಆಶಿಕಾ ರಂಗನಾಥ್ ಮತ್ತು ಪರಿಣಿತಾ ಕಿಟ್ಟಿ ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಹಿನ್ನೆಲೆಸಂಗೀತವನ್ನು ವೀರ್ ಸಮರ್ಥ್ ಅವರು ಸಂಯೋಜಿಸಿದ್ದಾರೆ, ಗುರು ಪ್ರಶಾಂತ್ ರೈ ಅವರ ಛಾಯಾಗ್ರಹಣವಿದೆ. == ಕಥಾವಸ್ತು == ಈ ಚಿತ್ರವು ಕ್ಯಾಪ್ಟನ್ ಶಿವರಾಜ್ ಜೀವನದ ಸುತ್ತ ಸುತ್ತುತ್ತದೆ. ವೋಟ್-ಬ್ಯಾಂಕ್ ರಾಜಕಾರಣ ಮಾಡುವ ರಾಜಕಾರಣಿಗಳ ಸಹಾಯದಿಂದ ಬೆಂಗಳೂರಿನಲ್ಲಿ ಬಾಂಗ್ಲಾದೇಶಿ ನುಸುಳುಕೋರರು ಪ್ರವರ್ಧಮಾನಕ್ಕೆ ಬರುತ್ತಾರೆ ಎಂಬ ವಿಷಯದೊಂದಿಗೆ ಚಿತ್ರವು ಆರಂಭವಾಗುತ್ತದೆ. ಶಿವರಾಜ್, ತನ್ನ ಇಬ್ಬರು ಸಹಚರರಾದ ವಿಜಿ ಮತ್ತು ಗುರುಗಳೊಂದಿಗೆ, ಬಾಂಗ್ಲಾದೇಶಿ ನುಸುಳುಕೋರರ ಮೇಲೆ ದಾಳಿ ಮಾಡಲಾಗುವುದು ಎಂದು ವ್ಯಾಪಕವಾದ ವದಂತಿಗಳನ್ನು ಹರಡುವ ಮೂಲಕ ಅವರನ್ನು ಓಡಿಸುತ್ತಾನೆ. ಅವರು ಕರ್ನಾಟಕದ ಭ್ರಷ್ಟ ಮುಖ್ಯಮಂತ್ರಿಯೊಂದಿಗೆ ವೈಮನಸ್ಯ ಹೊಂದುತ್ತಾನೆ. ಡ್ರಗ್ ಮಾಫಿಯಾ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಮಂಗಳೂರಿನ ಭೂಗತ ಪಾತಕಿಯೊಬ್ಬನಿಗೆ ಶಿವರಾಜ್‌ನನ್ನು ಕೊಲ್ಲುವ ಕೆಲಸ ಕೊಡಲಾಗಿದೆ, ಆದರೆ ಅವನು ನಂತರ ನಿಷ್ಠಾವಂತನಾಗಿ ಬದಲಾಗುತ್ತಾನೆ. ಚಿತ್ರದ ದ್ವಿತೀಯಾರ್ಧದಲ್ಲಿ, ಫ್ಲ್ಯಾಷ್‌ಬ್ಯಾಕ್ ಇದೆ. ಅದರಲ್ಲಿ ಶಿವರಾಜ್ ಕಾಶ್ಮೀರದಲ್ಲಿ ದೇಶಭಕ್ತ ಭಾರತೀಯ ಸೇನೆಯ ಕ್ಯಾಪ್ಟನ್ ಆಗಿ ಕೆಲಸ ಮಾಡುತ್ತಿದ್ದು ಪ್ರೀತಿಯ ಹೆಂಡತಿ, ಮಗು, ತನ್ನ ಒಡಹುಟ್ಟಿದವರು ಮತ್ತು ಪೋಷಕರೊಂದಿಗೆ ಇದ್ದಾನೆ. ಅವನ ಸಹೋದರಿ ತಿಳಿಯದೆ ಒಬ್ಬ ಪಾಕಿಸ್ತಾನಿಯನ್ನು ಪ್ರೀತಿಸುತ್ತಾಳೆ. ಭಯೋತ್ಪಾದಕರಿಂದಾಗಿ ಕುಟುಂಬವು ನಾಸವಾಗುತ್ತದೆ, ಅವನ ಮಗು ಅಂಗವಿಕಲವಾಗುತ್ತದೆ. ಭಯೋತ್ಪಾದಕರ ನಾಯಕನನ್ನು ಮುಗಿಸುವ ಮೂಲಕ ಶಿವರಾಜ್ ತನ್ನ ಹೆತ್ತವರು, ಹೆಂಡತಿ ಮತ್ತು ಸಹೋದರಿಯ ಸಾವಿಗೆ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬುದು ಅಲ್ಲಿದೆ. ನಾಯಕ ಎಂದರೆ ವೋಟು ಪಡೆಯಲು ನೋಟು ಕೊಡುವವನಲ್ಲ, ಗಡಿಯಲ್ಲಿ ನಿಂತು ಇಡೀ ರಾಷ್ಟ್ರಕ್ಕಾಗಿ ಹೋರಾಡುವವನೇ ನಾಯಕ ಎನ್ನುವುದನ್ನು ಸಿನಿಮಾ ಹೇಳುತ್ತದೆ! == ಪಾತ್ರವರ್ಗ == ಕ್ಯಾಪ್ಟನ್ ಶಿವರಾಜ್ ಪಾತ್ರದಲ್ಲಿ ಶಿವರಾಜ್ ಕುಮಾರ್ ದೀಪಾ ಪಾತ್ರದಲ್ಲಿ ಪ್ರಣಿತಾ ಸುಭಾಷ್ ವಿಜಯ್ ರಾಘವೇಂದ್ರ ವಿಜಯ್ ಪಾತ್ರದಲ್ಲಿ ಗುರುರಾಜ್ ಜಗ್ಗೇಶ್ ಯೋಗೇಶ್ ವಂಶಿ ಕೃಷ್ಣ ಚಾಂದಿನಿಯಾಗಿ ಶರ್ಮಿಳಾ ಮಾಂಡ್ರೆ ಶ್ರೇಯಾ ಪಾತ್ರದಲ್ಲಿ ಆಶಿಕಾ ರಂಗನಾಥ್ ಚುಮ್ಮಿಯಾಗಿ ಪರಿಣಿತಾ ಕಿಟ್ಟಿ ಪ್ರಕಾಶ್ ಬೆಳವಾಡಿ ಮುಖ್ಯಮಂತ್ರಿ ರಾಕ್‌ಲೈನ್ ವೆಂಕಟೇಶ್ == ಉತ್ಪಾದನೆ == ಈ ಚಲನಚಿತ್ರವನ್ನು ಅಧಿಕೃತವಾಗಿ ೧೯ ಏಪ್ರಿಲ್ ೨೦೧೬ ರಂದು ಬೆಂಗಳೂರಿನಲ್ಲಿ ಪ್ರಾರಂಭಿಸಲಾಯಿತು. ಕರ್ನಾಟಕ ಮತ್ತು ಆಂಧ್ರಪ್ರದೇಶದ ವಿವಿಧ ಸ್ಥಳಗಳನ್ನು ಹೊರತುಪಡಿಸಿ, ಚಿತ್ರೀಕರಣವು ಭಾರೀ ಹಿಮಪಾತದ ನಡುವೆ ಕಾಶ್ಮೀರದಲ್ಲಿ ನಡೆಯಿತು. ಜನವರಿ ೨೦೧೭ ರಲ್ಲಿ ಕಾಶ್ಮೀರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾದ್ದರಿಂದ ಸಿಬ್ಬಂದಿಯು ಮನಾಲಿಗೆ ತೆರಳಿ ಚಿತ್ರೀಕರಣವನ್ನು ಮುಂದುವರೆಸಿತು == ಹಿನ್ನೆಲೆಸಂಗೀತ == ವೀರ್ ಸಮರ್ಥ್ ಚಿತ್ರದ ಸಂಗೀತ ಸಂಯೋಜನೆಗೆ ಸಹಿ ಹಾಕಿದರು, ಇದು ಅವರ ೨೫ ನೇ ಚಿತ್ರವಾಗಿದೆ. ೯ ಜುಲೈ ೨೦೧೭ ರಂದು ಹಾಡುಗಳನ್ನು ಬಿಡುಗಡೆ ಮಾಡಲಾಯಿತು, ತೆಲುಗು ನಟ ನಂದಮೂರಿ ಬಾಲಕೃಷ್ಣ ಅವರು ಅಧಿಕೃತವಾಗಿ ಆಡಿಯೊವನ್ನು ಬಿಡುಗಡೆ ಮಾಡಿದರು. ಎಲ್ಲ ಹಾಡುಗಳು ವಿ. ನಾಗೇಂದ್ರ ಪ್ರಸಾದ್ ಅವರಿಂದ ರಚಿತ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಮಾಸ್ ಲೀಡರ್ @ ಐ ಎಮ್ ಡಿ ಬಿ ಮಾಸ್ ಲೀಡರ್ (ಚಲನಚಿತ್ರ) ಫೇಸ್‌ಬುಕ್‌ನಲ್ಲಿ